DreamPirates > Lyrics > Neene Modalu Neene Kone Lyrics

Neene Modalu Neene Kone Lyrics

Author: DreamPirates | Last Updated : 2022-11-03 00:00:00

Neene Modalu Neene Kone Lyrics

Film/Album :
Language : NA
Lyrics by : A P Arjun
Singer : Shreya Ghoshal
Composer : A P Arjun
Publish Date : 2022-11-03 00:00:00

Neene Modalu Neene Kone Lyrics


Song Lyrics :

Lyrics

ನೀನೇ ಮೊದಲು ನೀನೇ ಕೊನೆ
ಬೇರೆ ಯಾರು ಬೇಡ ನನಗೆ
ಉಸಿರು ಇರುವ ಕೊನೆಯವರೆಗೂ
ಇರಲೇ ಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸು ಒಂದು ಬಾರಿ
ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ

ನೀನೇ ಮೊದಲು ನೀನೇ ಕೊನೆ
ಬೇರೆ ಯಾರು ಬೇಡ ನನಗೆ

ನೀನಿರುವುದು ನನಗೆ
ನಾನು ಇರುವುದು ನಿನಗೆ
ನಮ್ಮಿಂದ ಇನ್ನೂ ಪ್ರೀತಿ ಬೆಳೆಯಲಿ ಆಕಾಶದ ತುದಿಗೆ
ಕಡಲು ಇರುವುದು ಅಲೆಗೆ
ಮಳೆಯು ಇರುವುದು ಇಳೆಗೆ
ಎದೆಯಲ್ಲಿ ಇನ್ನೂ ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ
ಆಮಂತ್ರಿಸು ನನ್ನ ನಿನ್ನ ಪ್ರೀತಿಯ ಅರಮನೆಗೆ
ಕಾದಿರಲಿ ನನಗೊಂದು ಅಂಬಾರಿ ಮೆರವಣಿಗೆ
ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ಎಲ್ಲ ನಿನ್ನಿಂದಲೇ
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ

ಜೀವ ಹೋದರೂನು
ಈ ಜೀವಕೆ ಜೀವ ನೀನು
ಸಾಕೆನ್ನುವಂತೆ ಪ್ರೀತಿಸಬೇಕು ಸಾಯುವವರೆಗೂ ನಾನು
ಪ್ರತಿಯೊಂದು ಹೆಜ್ಜೆಯೂ ನನ್ನ
ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೆ ಹೋದರು ನನ್ನ ಜೊತೆಗೆ ನಿನ್ನ ನೆರಳೆ ಬರಲಿ
ಮನಸಾರೆ ನಿನ್ನನ್ನು ನಾ ಒಪ್ಪಿಕೊಂಡಿರುವೆ
ನಿನ್ನನ್ನು ನೋಡುತ್ತಾ ನಾ ಮೌನಿಯಾಗಿರುವೆ
ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ಎಲ್ಲ ನಿನ್ನಿಂದಲೇ
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ

ನೀನೇ ಮೊದಲು ನೀನೇ ಕೊನೆ
ಬೇರೆ ಯಾರು ಬೇಡ ನನಗೆ
ಉಸಿರು ಇರುವ ಕೊನೆಯವರೆಗೂ
ಇರಲೇ ಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸು ಒಂದು ಬಾರಿ
ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ

Tag : lyrics

Watch Youtube Video

Neene Modalu Neene Kone Lyrics

Relative Posts